Monday 1 August 2011


ನನ್ನ ನೆಚ್ಚಿನ ಕವಿಯೊಂದಿಗೆ 

 

  

Category Archives: ಪ್ರೊ. ಸಿದ್ದಲಿಂಗಯ್ಯ

ಬಾ ನಲ್ಲೆ ಮಧುಚಂದ್ರಕೆ (1993) – ಆ ಬೆಟ್ಟದಲ್ಲಿ

ಸಾಹಿತ್ಯ : ಪ್ರೊ. ಸಿದ್ದಲಿಂಗಯ್ಯ
ಸಂಗೀತ : ಹಂಸಲೇಖ
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ
ಹಾಡು ಕೇಳಿ
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ
ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿ ಕಿರಣ!! ಸುಟ್ಟಾವು ಬೆಳ್ಳಿ ಕಿರಣ.
ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ!
ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ
ನೀ ಇಳಿಯಬೇಡ ಗೆಳತಿ ಆ ಕಣಿವೆಯಲ್ಲಿ
ತತ್ತರಿಸುವಂತೆ ಕಾಲಲ್ಲಿ ಕಮಲ ಮುತ್ತುವುವು ಮೊಲದ ಹಿಂಡು!! ಮುತ್ತುವುವು ಮೊಲದ ಹಿಂಡು.
ಈ ನನ್ನ ಎದೆಯ ಹೂದೋಟದಲ್ಲಿ ನೀನೆತ್ತ ಪ್ರೀತಿ ಬಳ್ಳಿ!
ಈ ನನ್ನ ಎದೆಯ ಹೂದೋಟದಲ್ಲಿ ನೀನೆತ್ತ ಪ್ರೀತಿ ಬಳ್ಳಿ
ನೀನೆತ್ತ ಪ್ರೀತಿ ಬಳ್ಳಿ ಹೂದೋಟದಲ್ಲಿ
ಫಲ ಕೊಟ್ಟಿತೇನೆ ಹೂ ಬಿಟ್ಟಿತೇನೆ ಉಲ್ಲಾಸವನ್ನು ಚೆಲ್ಲಿ!! ಉಲ್ಲಾಸವನ್ನು ಚೆಲ್ಲಿ.
ಈ ಊರ ಬನಕೆ ಚೆಲುವಾದ ಒಂಟಿ ಹೂವಾಗಿ ಅರಳಿ ನೀನು!
ಈ ಊರ ಬನಕೆ ಚೆಲುವಾದ ಒಂಟಿ ಹೂವಾಗಿ ಅರಳಿ ನೀನು
ಹೂವಾಗಿ ಅರಳಿ ನೀನು ಈ ಊರ ಬನಕೆ
ಮರೆಯಾಗಬೆಡ ಮಕರಂದವೆಂದ ದುಂಬಿಗಳ ದಾಳಿಯಲ್ಲಿ!! ದುಂಬಿಗಳ ದಾಳಿಯಲ್ಲಿ.
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ
ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿ ಕಿರಣ!! ಸುಟ್ಟಾವು ಬೆಳ್ಳಿ ಕಿರಣ.

ಅಸಂಭವ (1986) – ಯಾರಿಗೆ ಬಂತು? ಎಲ್ಲಿಗೆ ಬಂತು?

ಸಾಹಿತ್ಯ : ಸಿದ್ಧಲಿಂಗಯ್ಯ
ಸಂಗೀತ : ಶಂಕರ್-ಗಣೇಶ್
ಗಾಯನ : ರಮೇಶ್
ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಟಾಟಾ ಬಿರ್ಲಾ ಜೋಬಿಗೆ ಬಂತು
ಜನಗಳ ತಿನ್ನುವ ಬಾಯಿಗೆ ಬಂತು
ಕೋಟ್ಯಾಧೀಶನ ಕೋಣೆಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಬಡವನ ಮನೆಗೆ ಬರಲಿಲ್ಲ
ಬೆಳಕಿನ ಕಿರಣ ತರಲಿಲ್ಲ
ಗೋಳಿನ ಕಡಲನು ಬತ್ತಿಸಲಿಲ್ಲ
ಸಮತೆಯ ಹೂವನು ಅರಳಿಸಲಿಲ್ಲ
ಹಣವಂತರು ಕೈಸನ್ನೆ ಮಾಡಿದರೆ
ಕತ್ತಲೆಯಲ್ಲಿ ಬೆತ್ತಲೆಯಾಯಿತು
ಯಾರೂ ಕಾಣದ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ
ಸಾವಿರಾರು ಜನ ಗೋರಿಯಾದರು
ಲಕ್ಷ ಲಕ್ಷ ಜನ ಗಲ್ಲಿಗೇರಿದರು
ರೈತ ಕಾರ್ಮಿಕರು ರಕ್ತವ ಕೊಟ್ಟರು
ಯಾರಿಗೆ ಬಂತು ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ
ಪೋಲೀಸರ ಬೂಟಿಗೆ ಬಂತು
ಮಾಲೀಕರ ಚಾಟಿಗೆ ಬಂತು
ಬಂದೂಕದ ಗುಂಡಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಪಾರ್ಲಿಮೆಂಟಿನ ಕುರ್ಚಿಯ ಮೇಲೆ
ವರ್ಷಗಟ್ಟಲೆ ಚರ್ಚೆಗೆ ಕೂತು
ಬಡವರ ಬೆವರು ರಕ್ತವ ಕುಡಿದು
ಏಳಲೇಇಲ್ಲ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ
ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ?


No comments:

Post a Comment